Indian Railways News => Topic started by nikhilndls on Oct 06, 2013 - 15:58:45 PM


Title - Railways to hike passenger and freight tariff from October second week | ಇಂಧನ ದರ ಏರಿಕೆ: ರೈಲ್ವೆ ಟಿಕೆಟ
Posted by : nikhilndls on Oct 06, 2013 - 15:58:45 PM

ಇಂಧನ ದರ ಏರಿಕೆ: ರೈಲ್ವೆ ಟಿಕೆಟ್ ದರವೂ ಏರಿಕೆ Posted by: Srinath Published: Saturday, October 5, 2013, 9:29 [IST]

ನವದೆಹಲಿ, ಅ.5: ಒಂಬತ್ತು ಹಿಂದಷ್ಟೇ ಪ್ರಯಾಣ ದರ ಹೆಚ್ಚಳ ಮಾಡಿದ್ದ ರೈಲ್ವೆ ಇಲಾಖೆಯು ಇದೇ ಅಕ್ಟೋಬರ್ ಎರಡನೆಯ ವಾರದಿಂದ ಪ್ರಯಾಣ ದರವನ್ನು ಮತ್ತೆ ಶೇ. 2-3ರಷ್ಟು ಹೆಚ್ಚಳ ಮಾಡಿದೆ. ಜತೆಗೆ, ಅ. 10ರಿಂದ ಅನ್ವಯವಾಗುವಂತೆ ಸರಕು ಸಾಗಣೆ ದರವನ್ನೂ ಹೆಚ್ಚಿಸಲಾಗಿದೆ. ಕಳೆದ ಮುಂಗಡಪತ್ರದಲ್ಲಿ ಘೋಷಣೆ ಮಾಡಲಾಗಿದ್ದ ಇಂಧನ ವೆಚ್ಚ ಹೊಂದಾಣಿಕೆ (ಎಫ್ ಎಸಿ) ನೀತಿಯನ್ವಯ ಟಿಕೆಟ್‌ ದರ ಏರಿಕೆ ಮಾಡಲಾಗಿದೆ. ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಮುಂದಿನ ಆರು ತಿಂಗಳಲ್ಲಿ 1,200 ಕೋಟಿ ರೂ ಹೊರೆ ಭರಿಸಬೇಕಾಗಿದ್ದು, ಇದನ್ನ ಸರಿದೂಗಿಸಲು ಪ್ರತಿ ಆರು ತಿಂಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಣೆಗೆ ಮುಂದಾಗಿದೆ. ಇದರ ಜತೆಗೆ ಇಲಾಖೆಯಲ್ಲಿನ ನಾನ್ ಗೆಜೆಟೆಡ್ ಸಿಬ್ಬಂದಿಗೆ ಬೋನಸ್ ವಿತರಿಸಿರುವುದೂ ಪ್ರಯಾಣ ದರ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ. ದರ ಏರಿಕೆ ಎಷ್ಟೆಷ್ಟು ?

* ಎಲ್ಲಾ ದರ್ಜೆಗೆ ಅನ್ವಯವಾಗುವಂತೆ 1 ಸಾವಿರ ರೂ. ಬೆಲೆಯ ಟಿಕೆಟ್‌ ಗೆ 20 ರೂ. ಹೆಚ್ಚಳ

* ಎಸಿ, ಸ್ಲೀಪರ್‌ ಕ್ಲಾಸ್‌ ಟಿಕೆಟ್‌ ಬೆಲೆ ಶೇ. 2ರಷ್ಟು ಹೆಚ್ಚಳ

* ಸರಕು ಸಾಗಣೆ ದರ ಶೇ. 1.7ರಷ್ಟು ಹೆಚ್ಚಳ

* ಉಪನಗರ ರೈಲ್ವೆ ಸಂಚಾರದಲ್ಲಿ ಸೆಕೆಂಡ್‌ ಕ್ಲಾಸ್‌, ಸಾಮಾನ್ಯ ದರ್ಜೆ ಪ್ರಯಾಣ, ಮಾಸಿಕ ಪಾಸ್ ದರ ಏರಿಕೆ ಇಲ್ಲ

* ಉಪನಗರದ ಹೊರಗಿನ ಸೆಕೆಂಡ್‌ ಕ್ಲಾಸ್‌ ಪ್ರಯಾಣಕ್ಕೆ ಗರಿಷ್ಠ 5 ರೂ. ಏರಿಕೆ ರೈಲ್ವೆ ಇಲಾಖೆಯು ಡೀಸೆಲ್ ಇಂಧನಕ್ಕಾಗಿ 16,000 ಕೋಟಿ ರೂ ಮತ್ತು ವಿದ್ಯುತ್ ಇಂಧನ ವೆಚ್ಚವಾಗಿ 9,000 ಕೋಟಿ ರೂ ವೆಚ್ಚ ಮಾಡುತ್ತದೆ. ಏಪ್ರಿಲ್ ತಿಂಗಳಿಂದೀಚೆಗೆ ಡೀಸೆಲ್ ಬೆಲೆ ಶೇ. 7ರಷ್ಟು ಮತ್ತು ವಿದ್ಯುತ್ ಬೆಲೆ ಶೇ. 16ರಷ್ಟು ಏರಿಕೆಯಾಗಿದೆ. ಇಲಾಖೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವಬರಿಯಾಗಿ ಪ್ರಯಾಣ ದರದ ಬಾಬತ್ತಿನಲ್ಲಿ 450 ಕೋಟಿ ರೂ ಮತ್ತು 700 ಕೋಟಿ ರೂ ಗಳಿಸುವ ಅಂದಾಜು ಹೊಂದಿದೆ.